Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile
Ajaykumar Sharma | ಅಜಯ್ ಶರ್ಮಾ

@ajkumarsharma

| Historian 🔆| Author 🖋| Traveller 🚵| Trekker 🐾| Freelance Researcher 💡| Landscape & Wildlife Photographer 📸| Proud Malenadiga 💦

ID: 275418620

calendar_today01-04-2011 07:07:40

506 Tweet

321 Followers

434 Following

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ಅಗೆ ಭತ್ತ## ಮೊನ್ನೆ ದಿನ ನೀರಲ್ಲಿ ನೆನೆಹಾಕಿ ತೆಗೆದು ಗೋಣಿಚೀಲದಲ್ಲಿ ಕಟ್ಟಿ‌ ಅದನ್ನು ಬಚ್ಚಲ ಮನೆಯಲ್ಲಿ ಬಿಸಿ ನೀರು ಬೀಳುವ ಜಾಗದಲ್ಲಿ ಒಂದು ದಿನ ಇಟ್ಟಾಗ ಮೊಳಕೆ ಒಡೆದ ಬೀಜದಿಂದ ಇಂದು ಅಗೆ ಭತ್ತ ಹಾಕುವ ಕೆಲಸ ಶುರು ಆಯಿತು.ಇನ್ನೂ ಏನಿದ್ದರೂ ಹಕ್ಕಿಗಳಿಂದ ಅಗೆ ಭತ್ತವನ್ನು ಕಾಯುವ ಕೆಲಸ. #ಅಗೆ #ಅಗೆಭತ್ತ #ಗದ್ದೆ #ಭತ್ತದಗದ್ದೆ #ಬಿದನೂರು

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ಬಿದನೂರು ನಗರದ ಭಾನುವಾರದ ಸಂತೆಗೆ ಹೋಗೋಣ ಅಂದರೆ ಈ ಮಳೆ ಕಡಿಮೆನೇ ಆಗುತ್ತಿಲ್ಲ. #ಬಿದನೂರು #ಬಿದನೂರುನಗರ #ಹೊಸನಗರತಾಲ್ಲೂಕು #bidanuru #bidanurunagara #Hosanagarataluk

ಬಿದನೂರು ನಗರದ ಭಾನುವಾರದ ಸಂತೆಗೆ ಹೋಗೋಣ ಅಂದರೆ ಈ ಮಳೆ ಕಡಿಮೆನೇ ಆಗುತ್ತಿಲ್ಲ.

#ಬಿದನೂರು #ಬಿದನೂರುನಗರ #ಹೊಸನಗರತಾಲ್ಲೂಕು #bidanuru #bidanurunagara #Hosanagarataluk
Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ನಮ್ಮ ಗದ್ದೆಯಲ್ಲಿ ಅರಳಿದ ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆ. ಪೂರ್ವಿ ಓದುವ ಶಾಲೆ ಹೋದ ವರ್ಷ ಮಕ್ಕಳ ಸಂಖ್ಯೆ ಕಡಿಮೆ ಆದ ಕಾರಣ ಮುಚ್ಚುವ ಸ್ಥಿತಿ ತಲುಪಿತು. ಗ್ರಾಮೀಣ ಮಕ್ಕಳಿಗೆ ಆಸರೆಯಾಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಉಂಟಾಗಿದೆ.

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ಮಳೆ ಸ್ವಲ್ಪ ಹಳು ಆದ ತಕ್ಷಣ ಮಲೆನಾಡಿನಲ್ಲಿ ಹಕ್ಕಿಗಳ ಕಲರವ ಕೇಳುವುದೆ ಒಂದು ಆನಂದ. ಸಣ್ಣ ಗಾತ್ರದ ಕೇಸರಿ-ಕಪ್ಪು-ಹಳದಿ ವರ್ಣದ ಸಣ್ಣ ಚಿತ್ರಪಕ್ಷಿಯ ಹಾರಾಟ ಚೆಲ್ಲಾಟ ನೋಡುವುದೇ ಒಂದು ಖುಷಿ. #ಸಣ್ಣಚಿತ್ರಪಕ್ಷಿ #ಚಿತ್ರಪಕ್ಷಿ #ಮಲೆನಾಡು #ಹೊಸನಗರ #Smallminivet #minivet #malenadu

ಮಳೆ ಸ್ವಲ್ಪ ಹಳು ಆದ ತಕ್ಷಣ ಮಲೆನಾಡಿನಲ್ಲಿ ಹಕ್ಕಿಗಳ ಕಲರವ ಕೇಳುವುದೆ ಒಂದು ಆನಂದ. ಸಣ್ಣ ಗಾತ್ರದ ಕೇಸರಿ-ಕಪ್ಪು-ಹಳದಿ ವರ್ಣದ ಸಣ್ಣ ಚಿತ್ರಪಕ್ಷಿಯ ಹಾರಾಟ ಚೆಲ್ಲಾಟ ನೋಡುವುದೇ ಒಂದು ಖುಷಿ. 
#ಸಣ್ಣಚಿತ್ರಪಕ್ಷಿ #ಚಿತ್ರಪಕ್ಷಿ #ಮಲೆನಾಡು #ಹೊಸನಗರ  #Smallminivet #minivet #malenadu
Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ಅಪ್ರಕಟಿತ ಶಾಸನ##Inscription## ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ರ‌್ಯಾವೆ ಹತ್ತಿರವಿರುವ, ಅಂಡಗದೋದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ ಬಾಕಿ ಎನ್ನುವ ಕುಗ್ರಾಮದಲ್ಲಿ ಇರುವ ಸುಂದರವಾದ ೧೫ ಸಾಲಿನ ಶಾಸನ ಇರುವ ವೀರಗಲ್ಲು. ಇದನ್ನು ಸ್ಥಳೀಯರು ಮಹಾಸತಿ ಎಂದು ಆರಾಧಿಸುತ್ತ ಅದನ್ನು ಸಂರಕ್ಷಿಸಿದ್ದಾರೆ.

##ಅಪ್ರಕಟಿತ ಶಾಸನ##Inscription##
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ರ‌್ಯಾವೆ ಹತ್ತಿರವಿರುವ, ಅಂಡಗದೋದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ ಬಾಕಿ ಎನ್ನುವ ಕುಗ್ರಾಮದಲ್ಲಿ ಇರುವ ಸುಂದರವಾದ ೧೫ ಸಾಲಿನ ಶಾಸನ ಇರುವ ವೀರಗಲ್ಲು. ಇದನ್ನು ಸ್ಥಳೀಯರು ಮಹಾಸತಿ ಎಂದು ಆರಾಧಿಸುತ್ತ ಅದನ್ನು ಸಂರಕ್ಷಿಸಿದ್ದಾರೆ.
Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ಗಂಧದ ಪರಿಮಳ ಬೀರುವ ಗಂಧಗರಿಗೆ ಮರ## ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಕಾಡು ಸಸ್ಯಗಳಲ್ಲಿ ಗಂಧಗರಿಗೆ ಸಹಾ ಒಂದು. ಎತ್ತರವಾಗಿ ಬೆಳೆಯುವ ಈ ಮರವನ್ನು ನಾಟಕ್ಕೆ ಉಪಯೋಗಿಸಲಾಗುತ್ತದೆ ಅದರಲ್ಲೂ ವಿಶೇಷವಾಗಿ ಹಲಗೆಗಳಿಗೆ ಮತ್ತು ಗಾಡಿಯ ನೊಗಗಳಿಗೆ ಉಪಯೋಗಿಸಲಾಗುತ್ತದೆ. ಇದರ ಒಂದು ಚಕ್ಕೆ ಒಲೆಯಲ್ಲಿ ಹಾಕಿದರೆ ಗಂಧದ ಪರಿಮಳವನ್ನು ಬೀರುತ್ತದೆ.

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ಗದ್ದೆಯ ಹಾಳೆಯನ್ನು ಕಡಿದಾಯಿತು, ಇನ್ನೂ ರಾಷ್ಟ್ರಕೂಟರ ರಾಜ ಲಾಂಛನ ನೇಗಿಲು ಸಹಾ ಸಿದ್ಧವಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಯಂತ್ರಗಳದೆ ಕಾರುಬಾರು, ಆದರೆ ಇವುಗಳ ನಡುವೆಯೂ ನಮ್ಮ ನೊಗ ಹೊರಲು ಯಾರು ಸಿದ್ಧರಾಗಿದ್ದಾರೆ ಗೊತ್ತಾ? ಅಂದ ಹಾಗೆ ನಮ್ಮ ಮಲೆನಾಡಿನ ಹೋರಿ, ಮಣಕ ಮತ್ತು ಕರ ಚಂದ ಅಲ್ವೇನ್ರಿ♥️

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ತೊರೆಗಳಲ್ಲಿ ಸಿಕ್ಕ ಸತ್ತ ಎಲೆಗಳಿಂದ ಹೊರಹೊಮ್ಮುವ ಕಲೆ## ಹೌದು ಮನಸ್ಸು ಮಾಡಿದರೆ ಈ ಸತ್ತ ಎಲೆಗಳಿಂದ ಮಾಡುವ ಕಲಾತ್ಮಕ ವಸ್ತುಗಳಿಂದ ಒಳ್ಳೆಯ ಆದಾಯ ಮಾಡಬಹುದು. ನಾವು ಚಿಕ್ಕವರಿದ್ದಾಗ ಈ ಸತ್ತ ಎಲೆಯನ್ನು ಪುಸ್ತಕದ ಮಧ್ಯದಲ್ಲಿ ವರ್ಷಾನುಗಟ್ಟಲೆ ಇಟ್ಟುಕೊಂಡು ಸಂಭ್ರಮಿಸುತ್ತಿದ್ದ ಕಾಲವೊಂದು ಇತ್ತು. #ಮಲೆನಾಡು #ಹೊಸನಗರತಾಲ್ಲೂಕು #ಹೊಸನಗರ

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ದೊಡೂರಿನ ಅಪ್ರಕಟಿತ ಶಾಸನ## ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ದೊಡೂರು ಗ್ರಾಮದ ಶ್ರೀ ಅಕ್ಷಯ್ ಗೌಡ ಅವರ ಅಡಿಕೆ ತೋಟದಲ್ಲಿ ಸಿಕ್ಕ ಕೆಳದಿ ಅರಸರ ಕಾಲದ ಶಾಸನ. ಇದು ಗದ್ದೆ (ಅಡುಸಗದ್ದೆ) ಭೂಮಿಗೆ ಸಂಬಂದಿಸಿದ ದಾನ ಶಾಸನವಾಗಿದೆ. ಶಾಸನದ ಪೂರ್ಣ ಪಾಠವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.

##ದೊಡೂರಿನ ಅಪ್ರಕಟಿತ ಶಾಸನ##
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ದೊಡೂರು ಗ್ರಾಮದ ಶ್ರೀ ಅಕ್ಷಯ್ ಗೌಡ ಅವರ ಅಡಿಕೆ ತೋಟದಲ್ಲಿ ಸಿಕ್ಕ ಕೆಳದಿ ಅರಸರ ಕಾಲದ ಶಾಸನ. ಇದು ಗದ್ದೆ (ಅಡುಸಗದ್ದೆ) ಭೂಮಿಗೆ ಸಂಬಂದಿಸಿದ ದಾನ ಶಾಸನವಾಗಿದೆ. ಶಾಸನದ ಪೂರ್ಣ ಪಾಠವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.
Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ಹಿಮ್ಮುಖವಾಗಿ ಮರದಿಂದ ಕೆಳಗೆ ಇಳಿಯುತ್ತಿರುವ ಮಲೆನಾಡಿನ‌ ರಾಕ್ಷಸ ಕಂಬಳಿ ಹುಳ. #ಕಂಬಳಿಹುಳ #ರಾಕ್ಷಸಕಂಬಳಿಹುಳ #ಮಲೆನಾಡು #ಹೊಸನಗರ #ಹೊಸನಗರತಾಲ್ಲೂಕು

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ಮುಂದಿನ ವಾರ ನೆಟ್ಟಿ ಹಬ್ಬಕ್ಕೆ ತಯಾರಿ ಆಗಿದೆ, ಇನ್ನೇನು ಕ್ಷಣಗಣನೆ ಆರಂಭ. #ಮಲೆನಾಡು #ನೆಟ್ಟಿ #ನಾಟಿ #ಭತ್ತ #ಭತ್ತದಗದ್ದೆ #ಗದ್ದೆ #ಬಿದನೂರುನಗರ #ಬಿದನೂರು #ಹೊಸನಗರ #ಹೊಸನಗರತಾಲ್ಲೂಕು

ಮುಂದಿನ ವಾರ ನೆಟ್ಟಿ ಹಬ್ಬಕ್ಕೆ ತಯಾರಿ ಆಗಿದೆ, ಇನ್ನೇನು ಕ್ಷಣಗಣನೆ ಆರಂಭ.

#ಮಲೆನಾಡು #ನೆಟ್ಟಿ #ನಾಟಿ #ಭತ್ತ #ಭತ್ತದಗದ್ದೆ #ಗದ್ದೆ #ಬಿದನೂರುನಗರ #ಬಿದನೂರು #ಹೊಸನಗರ #ಹೊಸನಗರತಾಲ್ಲೂಕು
Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

ಆರ್ಕಿಡ್ ಹೂವು ನೋಡಲು ಎಷ್ಟು ಚೆಂದವೋ ಅದರಿಂದ ಪರಿಸರಕ್ಕೂ ಅಷ್ಟೇ ಲಾಭವುಂಟು. ನಮ್ಮ ಗದ್ದೆ ಅಂಚಿನಲ್ಲಿ ಇರುವ ತೋಡಿನಲ್ಲಿ ಇರುವ ಮರಕ್ಕೆ ಹಬ್ಬಿರುವ ಆರ್ಕಿಡ್ ಮತ್ತು ‌ಅದರ ಹೂವು ನೋಡಲು ‌ಬಹಳ ಸೊಗಸಾಗಿದೆ. ನೈಸರ್ಗಿಕವಾಗಿ ಬೆಳೆದಿರುವ ಆರ್ಕಿಡ್, ಆ ಜಾಗದಲ್ಲಿ ಆ ಪ್ರದೇಶದಲ್ಲಿ ನೀರಿನ‌ ಕೊರತೆ ಇಲ್ಲದಿರುವುದನ್ನು ಸೂಚಿಸುತ್ತದೆ.