
Fouzia Taranum
@fouzia_taranum
IAS Karnataka | Civil Servant | Dreamer | Explorer | Learner |
ID: 1139575005253996544
14-06-2019 16:47:08
753 Tweet
3,3K Followers
265 Following


ಸಫಾಯಿ ಕರ್ಮಚಾರಿಗಳ ಕುರಿತು ನಡೆದ ಸಭೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಸಫಾಯಿ ಕರ್ಮಚಾರಿಗಳ ದುರ್ಬಳಕೆ ಕಂಡುಬಂದಲ್ಲಿ ಅಂತಹ ಸಂಸ್ಥೆ ಹಾಗೂ ಅಧಿಕಾರಿಗಳ ವಿರುದ್ದ ಕ್ರಮ ಕೊಗೊಳ್ಳಲಾಗುವುದು ಎಂದು ಸೂಚಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ SCSP/TSP ಅನುದಾನ ಬಳಕೆಯ ಪ್ರಗತಿ ಪರಿಶೀಲನೆ ಮಾಡಲಾಯಿತು. DIPR-KALABURAGI


ಈ ಭಾಗದ ಸ್ಥಳೀಯ ನವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಾಗೂ ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ PDA ಇಂಜಿನಿಯರಿಂಗ್ ಕಾಲೇಜು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಎಕ್ಸಲ್ ಕಾರ್ಪ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. DIPR-KALABURAGI Priyank Kharge / ಪ್ರಿಯಾಂಕ್ ಖರ್ಗೆ


ಕಂದಾಯ ಇಲಾಖೆಯಲ್ಲಿ ಭೂ ಸುರಕ್ಷಾ ಆಪ್ ಮೂಲಕ ಭೂ ದಾಖಲೆಗಳ ಗಣಕೀಕರಣ ಯೋಜನೆ ಜಾರಿಯಲ್ಲಿದ್ದು ಜೇವರ್ಗಿ ತಾಲೂಕಿನ ತಹಸೀಲ್ದಾರ್ ಕಾರ್ಯಾಲಯದ ಅಭಿಲೇಖಾಲಯವು ಆಧುನೀಕರಣಗೊಂಡಿದೆ. ಇದೇ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಿನ ಅಭಿಲೇಖಾಲಯಗಳನ್ನು ಆಧುನೀಕರಣ ಗೊಳಿಸಲಾಗುತ್ತಿದೆ. DIPR-KALABURAGI Krishna Byre Gowda


Kalburgi Rotti, a branded Jawar roti (bread), that the Kalburgi district administration start promoting a year ago under the guidance of Fouzia Taranum


ಅಫಜಲಪೂರ ತಾಲೂಕಿನ ಘತ್ತರಗಾ ಭಾಗ್ಯವಂತಿ ದೇವಸ್ಥಾನ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸದರಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಪಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಇಂದಿರಾ ಕ್ಯಾಂಟೀನ್, ಘತ್ತರಗಾ ಬ್ಯಾರೇಜ್, ಸೊನ್ನ ಬ್ಯಾರೇಜ್ ವೀಕ್ಷಣೆ ಮಾಡಿ ನೀರಿನ ಮಟ್ಟದ ಮಾಹಿತಿ ಪಡೆಯಲಾಯಿತು. DIPR-KALABURAGI



ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಲಬುರಗಿ ನಗರದ ಶಹಾಬಜಾರ್ ಪ್ರದೇಶದ ಗೋಕುಲ್ ನಗರ ಜಿ.ಡಿ.ಎ. ಬಡಾವಣೆಯ ಉದ್ಯಾನವನದಲ್ಲಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸಸಿ ನೆಟ್ಟು ಕಲಬುರಗಿ ಜಿಲ್ಲೆಯಲ್ಲಿ ಹಸರೀಕರಣಕ್ಕೆ ಕರೆ ನೀಡಲಾಯಿತು. DIPR-KALABURAGI Kalaburgi City Corporation

For the past few months, Chittapur ULB has developed the Solid Waste Management site significantly. They have also been collecting coconut husks separately & converting it to #Cocopeat which is being used by farmer friends for farming, in nurseries & gardening. Swachh Bharat Urban


Wadi ULB team has been segragating dry and wet waste, converting dry plastic waste into paver blocks by using moulding techniques. These pavers are durable and used in parking areas, gardens. A real example of #WastetoWealth Swachh Bharat Urban Uma Mahadevan Dasgupta


ಕಲಬುರಗಿ ತಾಲೂಕಿನ ಭೂ ಪರಿವರ್ತನೆ ಕೋರಿ ಬಂದಿರುವ ವಿವಿಧ ಗ್ರಾಮಗಳ ಅರ್ಜಿಗಳ ಸ್ಥಳ ಪರಿಶೀಲನೆ ಮಾಡಲಾಯಿತು. ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ಅಬಕಾರಿ ಇಲಾಖೆಯ ಸೆಕೆಂಡರಿ ಡಿಸ್ಟಿಲರಿ ಸೆಂಟರ್ ಮತ್ತು ಕೆ. ಎಸ್. ಬಿ. ಸಿ. ಎಲ್ ಡಿಪೋಗೆ ಭೇಟಿ ನೀಡಿ ಅದರ ಕಾರ್ಯವೈಖರಿ ಪರಿಶೀಲಿಸಲಾಯಿತು. DIPR-KALABURAGI


ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ "ಒಂದು ಭೂಮಿ, ಒಂದು ಅರೋಗ್ಯಕ್ಕಾಗಿ ಯೋಗ" 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಾಯಿತು. DIPR-KALABURAGI #YogaDay2025 #YogaForHealth

#ಪರಿಸರ ಸ್ನೇಹಿ ದಿಟ್ಟ ಹೆಜ್ಜೆ ಪ್ಲಾಸ್ಟಿಕ್ ಬ್ಯಾಗ್, ಮಿನರಲ್ ವಾಟರ್ ಬಾಟಲ್ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ನಿಂದ ಪರಿಸರ ಸ್ನೇಹಿ ಟೈಲ್ಸ್ ತಯಾರಿಕೆ ಮೂಲಕ ವಾಡಿ ಪುರಸಭೆ ವಿನೂತನ ಪ್ರಯೋಗ ಮಾಡಿದ್ದು, ಪರಿಸರ ಸ್ನೇಹಿ ದಿಟ್ಟ ಹೆಜ್ಜೆ ಇದಾಗಿದೆ. DIPR-KALABURAGI Priyank Kharge / ಪ್ರಿಯಾಂಕ್ ಖರ್ಗೆ UDD_Karnataka

ಅಪ್ಪ ಪಬ್ಲಿಕ್ ಶಾಲೆಯ ಪ್ರೋಗ್ರಾಮ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವಿವಿಧ ಯೋಜನೆಗಳಡಿ ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣಗಳನ್ನು ಶ್ರೀ ಪ್ರಿಯಾಂಕ್ ಖರ್ಗೆ ಸರ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು, ಮಾನ್ಯ ಶಾಸಕರುಗಳು ಉಪಸ್ಥಿತರಿದ್ದರು. DIPR-KALABURAGI


ಕಲಬುರಗಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಗುತ್ತಿಗೆ ಪದ್ದತಿ ರದ್ದು ಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಮಾಡುವ ಆದೇಶ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿ, ಶ್ರೀ ಪ್ರಿಯಾಂಕ್ ಖರ್ಗೆ ಸರ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ವಿತರಿಸಿದರು. DIPR-KALABURAGI Priyank Kharge / ಪ್ರಿಯಾಂಕ್ ಖರ್ಗೆ



ಮೇ 2025 ತಿಂಗಳ ಸಕಾಲ ಸೇವೆಯ ರ‌್ಯಾಂಕಿಂಗ್ ನಲ್ಲಿ ಕಲಬುರಗಿ ಜಿಲ್ಲೆಗೆ 3 ನೇ ಸ್ಥಾನ ದೊರಕಿದೆ. ಕಳೆದ 6 ತಿಂಗಳಿನಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಒಟ್ಟು 6,40,951 ಅರ್ಜಿಗಳು ಸ್ವೀಕೃತವಾಗಿದ್ದು ಇದರ ಪೈಕಿ 6,38,840 ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗಿ ಶೇ 99.67 % ಪ್ರಗತಿ ಸಾಧಿಸಲಾಗಿದೆ. DIPR-KALABURAGI


Efforts in water conservation, lake rejuvenation, kalyani (bawli) restoration, and ground water recharge done in rural and urban areas by CEO ZP Kalaburagi Kalaburgi City Corporation and PD DUDC!


ಶ್ರೀ ಪಂಕಜ್ ಕುಮಾರ್ ಪಾಂಡೆ ಭಾ.ಆ.ಸೇ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡು ಕಮಲಾಪುರ & ಕಲಬುರಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು, ಅಂಗನವಾಡಿ ಕೇಂದ್ರ, ವಸತಿ ಶಾಲೆಗಳಿಗೆ ಭೇಟಿ ನೀಡಲಾಗಿ, ಜಿಲ್ಲಾ ವಿಪ್ಪತ್ತು ನಿರ್ವಹಣಾ ಸಮಿತಿ ಸಭೆ ಮಾಡಲಾಯಿತು. PANKAJ KUMAR PANDEY, IAS
