Dr. Murugesh R Nirani (@niranimurugesh) 's Twitter Profile
Dr. Murugesh R Nirani

@niranimurugesh

State BJP Vice President - Karnataka | Former Minister for Large and Medium-scale Industries, Govt of Karnataka | Former Member of Legislative Assembly, Bilgi

ID: 1352462845703647234

calendar_today22-01-2021 03:47:44

5,5K Tweet

11,11K Followers

181 Following

Dr. Murugesh R Nirani (@niranimurugesh) 's Twitter Profile Photo

ನವರಾತ್ರಿ ಹಬ್ಬದ ಎಂಟನೇ ದಿನದಂದು ದೇವಿ ಮಹಾ ಗೌರಿಯನ್ನು ಪೂಜಿಸಲಾಗುವುದು. ಈ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳೂ ದೂರವಾಗಿ, ಸಂಪತ್ತು, ಆಯುಷ್ಯ, ಆಧ್ಯಾತ್ಮದ ಲಾಭಗಳೂ ದೊರೆತು ಯಶಸ್ಸು ಲಭಿಸುತ್ತದೆ. ಈ ತಾಯಿಯು ಎಲ್ಲರಿಗೂ ಒಳಿತನ್ನು ಮಾಡಲಿ. ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು.

ನವರಾತ್ರಿಯ ಒಂಬತ್ತನೇ ದಿನದಂದು ತಾಯಿ ಸಿದ್ಧಿ ದಾತ್ರಿಯನ್ನು ಪೂಜಿಸುವುದರ ಜೊತೆಗೆ ಮಹಾನವಮಿ ಮತ್ತು ಆಯುಧ ಪೂಜೆಯನ್ನು ಕೂಡ ಮಾಡಲಾಗುತ್ತದೆ. ಈ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ಅಂಧಕಾರಗಳು ದೂರವಾಗಿ, ಸುಖ-ಶಾಂತಿ ನೆಲೆಸುತ್ತದೆ. ಸರ್ವರಿಗೂ ದಸರಾ ಹಬ್ಬದ ಶುಭಾಶಯಗಳು.

Dr. Murugesh R Nirani (@niranimurugesh) 's Twitter Profile Photo

ತಾಯಿ ಚಾಮುಂಡೇಶ್ವರಿಯು ಮಹಿಷಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ ದಿನ, ಶ್ರೀ ರಾಮನು ರಾವಣನೆಂಬ ರಾಕ್ಷಸನನ್ನು ವಧಿಸಿದ ದಿನ, ಪಾಂಡವರು ಕೌರವರೆಂಬ ಮೋಸಗಾರರನ್ನು ಮಟ್ಟಹಾಕಿದ ದಿನವೇ ದಸರಾ. ಇಂದು ದೇವಿ ಚಾಮುಂಡೇಶ್ವರಿಯು ಎಲ್ಲರಿಗೂ ಒಳಿತನ್ನು ಮಾಡಲಿ. ಸರ್ವರಿಗೂ ವಿಜಯದಶಮಿ ಹಾಗೂ ದಸರಾ ಹಬ್ಬದ ಶುಭಾಶಯಗಳು.

Dr. Murugesh R Nirani (@niranimurugesh) 's Twitter Profile Photo

ಭಾರತ ಕಂಡ ಮಹಾನ್ ವಿಜ್ಞಾನಿ, ದೇಶದ ಮಿಸೈಲ್ ಮ್ಯಾನ್, ಕ್ಷಿಪಣಿ ಪಿತಾಮಹ, ಶಿಕ್ಷಣ ತಜ್ಞ, ಅತ್ಯುತ್ತಮ ವಾಗ್ಮಿ, ಯುವ ಸಮುದಾಯದ ಸ್ಪೂರ್ತಿ, 'ಜನರ ರಾಷ್ಟ್ರಪತಿಗಳು' ಎಂಬ ಹೆಗ್ಗಳಿಕೆ ಪಡೆದಿದ್ದ ಶ್ರೇಷ್ಠ ನಾಯಕ, ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಅನಂತ ಪ್ರಣಾಮಗಳು.

Dr. Murugesh R Nirani (@niranimurugesh) 's Twitter Profile Photo

ಮೈಸೂರು ದಸರಾ ಜಂಬೂಸವಾರಿಯಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿದ್ದ "ನಾಡಿನ ಅಧಿದೇವತೆ" #dasara #mysore #JambuSavari #chamundi

ಮೈಸೂರು ದಸರಾ ಜಂಬೂಸವಾರಿಯಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿದ್ದ "ನಾಡಿನ ಅಧಿದೇವತೆ"

#dasara #mysore #JambuSavari #chamundi
Dr. Murugesh R Nirani (@niranimurugesh) 's Twitter Profile Photo

ಅಭಿವೃದ್ಧಿಯ ಹರಿಕಾರರು, ಸಂಘಟನಾ ಚತುರರು, ಪಕ್ಷದ ಹಿರಿಯ ನಾಯಕಿ, ಉತ್ತಮ ವಾಗ್ಮಿ ಹಾಗೂ ಮಥುರಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಶ್ರೀಮತಿ ಹೇಮಾ ಮಾಲಿನಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಮತ್ತಷ್ಟು ಜನಪರ ಸೇವೆಗಾಗಿ ದೇವರು ನಿಮಗೆ ಉತ್ತಮ ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ಸದಾ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾ, ದೇಶವನ್ನು ಸುಭದ್ರವಾಗಿಡಲು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಶೌರ್ಯ, ಸಾಹಸ, ನಿಷ್ಠೆ ಹಾಗೂ ತ್ಯಾಗದ ಮೂಲಕ ಭಾರತಾಂಬೆಯನ್ನು ರಕ್ಷಣೆ ಮಾಡುತ್ತಾ ಅನನ್ಯ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆಗೆ ಸಂಸ್ಥಾಪನ ದಿನದ ಹಾರ್ದಿಕ ಶುಭಾಶಯಗಳು. #NSGRaisingDay #NationalSecurityGuard

ಸದಾ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾ, ದೇಶವನ್ನು ಸುಭದ್ರವಾಗಿಡಲು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಶೌರ್ಯ, ಸಾಹಸ, ನಿಷ್ಠೆ ಹಾಗೂ ತ್ಯಾಗದ ಮೂಲಕ ಭಾರತಾಂಬೆಯನ್ನು ರಕ್ಷಣೆ ಮಾಡುತ್ತಾ ಅನನ್ಯ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆಗೆ ಸಂಸ್ಥಾಪನ ದಿನದ ಹಾರ್ದಿಕ ಶುಭಾಶಯಗಳು.
 
#NSGRaisingDay  #NationalSecurityGuard
Dr. Murugesh R Nirani (@niranimurugesh) 's Twitter Profile Photo

ರಾಮಾಯಣ ಎಂಬ ಅತ್ಯದ್ಭುತ ಮಹಾಕಾವ್ಯವನ್ನು ರಚಿಸಿ, ಜೀವನದ ಮೌಲ್ಯಗಳನ್ನು, ಬದುಕಿನ ಸಾರ್ಥಕತೆಯನ್ನು ಇಡೀ ಜಗತ್ತಿಗೆ ಸಾರಿದ ಆದಿಕವಿ ವಾಲ್ಮೀಕಿ ಮಹರ್ಷಿಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಅವರ ಆದರ್ಶಗಳನ್ನು, ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ. ಸರ್ವರಿಗೂ 'ಮಹರ್ಷಿ ವಾಲ್ಮೀಕಿ ಜಯಂತಿಯ' ಶುಭಾಶಯಗಳು.

Dr. Murugesh R Nirani (@niranimurugesh) 's Twitter Profile Photo

ದೇಶಾದ್ಯಂತ ಬಿಜೆಪಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿರುವ ಪಕ್ಷದ ಹಿರಿಯರು, ಚುನಾವಣಾ ಚಾಣಕ್ಯ, ಅಭಿವೃದ್ಧಿಯ ಹರಿಕಾರ ಹಾಗೂ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಜನಪರ ಸೇವೆಗಾಗಿ ಆ ಭಗವಂತನು ನಿಮಗೆ ಮತ್ತಷ್ಟು ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ. #AmitShah #HomeMinister

ದೇಶಾದ್ಯಂತ ಬಿಜೆಪಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿರುವ ಪಕ್ಷದ ಹಿರಿಯರು, ಚುನಾವಣಾ ಚಾಣಕ್ಯ, ಅಭಿವೃದ್ಧಿಯ ಹರಿಕಾರ ಹಾಗೂ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಜನಪರ ಸೇವೆಗಾಗಿ ಆ ಭಗವಂತನು ನಿಮಗೆ ಮತ್ತಷ್ಟು ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ.

#AmitShah #HomeMinister
Dr. Murugesh R Nirani (@niranimurugesh) 's Twitter Profile Photo

ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು ಹಾಗೂ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರು ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ನೇ ಬ್ರಿಕ್ಸ್ ಸಮ್ಮೇಳನದ ವೇಳೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ಮಹತ್ವದ ಮಾತುಕತೆಯು ಮುಂದೆ ಎರಡೂ ದೇಶಗಳ ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಸ್ವತಂತ್ರ ಭಾರತಕ್ಕೆ ಅಗತ್ಯವಾದ ತಂತ್ರಜ್ಞಾನ ಸಂಸ್ಥೆಗಳಿಗೆ ಅಡಿಪಾಯ ಹಾಕುವುದರ ಜತೆಗೆ, ದೇಶಕ್ಕೊಂದು ವಿಜ್ಞಾನ ನೀತಿ-ನಿಯಮಾವಳಿಗಳನ್ನು ರೂಪಿಸಿದ ಮಹಾನ್ ವಿಜ್ಞಾನಿ, ಭಾರತದ ಪರಮಾಣು ವಿಜ್ಞಾನದ ಪಿತಾಮಹ ಡಾ. ಹೋಮಿ ಜಹಾಂಗೀರ್ ಭಾಭಾ ಅವರ ಜಯಂತಿಯಂದು ಅವರಿಗೆ ನನ್ನ ಅನಂತ ನಮನಗಳು. ವಿಜ್ಞಾನ ಕ್ಷೇತ್ರಕ್ಕೆ ಇವರು ಕೊಟ್ಟ ಕೊಡುಗೆ ಅಪಾರ.

ದೀಪಾವಳಿಯು ಕಗ್ಗತ್ತಲೆಯನ್ನು ಕಳೆದು ಬೆಳಕಿನ ಜೊತೆ ಸಂತೋಷ ಹಾಗೂ ಸಂಭ್ರಮಗಳನ್ನು ಹೊತ್ತು ತರುವ ಹಬ್ಬ. ಈ ಹಬ್ಬವು ಎಲ್ಲರ ಬದುಕಿನ ಕತ್ತಲೆ ಕಳೆದು ಸಕಲವನ್ನು ಸರ್ವರಿಗೂ ನೀಡಲಿ ಹಾಗೂ ನಾಡಿಗೂ ಮತ್ತು ದೇಶಕ್ಕೂ ಒಳಿತನ್ನು ಮಾಡಲಿ. ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

Dr. Murugesh R Nirani (@niranimurugesh) 's Twitter Profile Photo

ಪಕ್ಷದ ಸಮರ್ಥ ಸಂಘಟಕರು, ನಿಷ್ಠಾವಂತ ಕಾರ್ಯಕರ್ತರು, ಯುವ ನಾಯಕ, ಕಾರ್ಯಕರ್ತರ ಪ್ರೇರಕ, ಪಕ್ಷದ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತಷ್ಟು ಜನಪರ ಸೇವೆಗಾಗಿ ದೇವರು ನಿಮಗೆ ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ.

ಚನ್ನಪಟ್ಟಣ ಉಪಚುನಾವಣೆಯ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿರುವ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಅಲ್ಲಿನ ಇದ್ಲೂರು, ನೆಲ್ಲೂರು ಹಾಗೂ ಇನ್ನು ಹಲವಾರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದೆನು. ಈ ವೇಳೆ ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಚನ್ನಪಟ್ಟಣ ಉಪಚುನಾವಣೆಯ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿರುವ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಅಲ್ಲಿನ ಇದ್ಲೂರು, ನೆಲ್ಲೂರು ಹಾಗೂ ಇನ್ನು ಹಲವಾರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದೆನು. 

ಈ ವೇಳೆ ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Dr. Murugesh R Nirani (@niranimurugesh) 's Twitter Profile Photo

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸಿ, ಪಕ್ಷದ ಹಾಗೂ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿ, ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾದ ಭಾರತ ರತ್ನ ಶ್ರೀ ಎಲ್.ಕೆ ಅಡ್ವಾಣಿ ಅವರ ಜನ್ಮ ದಿನದಂದು ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ದೇವರು ನಿಮಗೆ ಮತ್ತಷ್ಟು ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ.

ಕನ್ನಡ ಚಿತ್ರರಂಗ ಕಂಡ ಅನರ್ಘ್ಯ ರತ್ನ, ಪ್ರತಿಭಾವಂತ ನಟ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಶ್ರೇಷ್ಠ ತಂತ್ರಜ್ಞ, ನಾಡಿನ ಅಭಿವೃದ್ಧಿ ಪರ ಅಪಾರ ದೂರದೃಷ್ಟಿ ಹೊಂದಿದ್ದ ಕನ್ನಡಿಗರ ಕಣ್ಮಣಿ, ಮರೆಯಲಾಗದ ಮಾಣಿಕ್ಯ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರಿಗೆ ನನ್ನ ಅಭಿಮಾನ ಪೂರ್ವಕ ನಮನಗಳು. #shankarnag #actor #birthday

ಕನ್ನಡ ಚಿತ್ರರಂಗ ಕಂಡ ಅನರ್ಘ್ಯ ರತ್ನ, ಪ್ರತಿಭಾವಂತ ನಟ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಶ್ರೇಷ್ಠ ತಂತ್ರಜ್ಞ, ನಾಡಿನ ಅಭಿವೃದ್ಧಿ ಪರ ಅಪಾರ ದೂರದೃಷ್ಟಿ ಹೊಂದಿದ್ದ ಕನ್ನಡಿಗರ ಕಣ್ಮಣಿ, ಮರೆಯಲಾಗದ ಮಾಣಿಕ್ಯ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರಿಗೆ ನನ್ನ ಅಭಿಮಾನ ಪೂರ್ವಕ ನಮನಗಳು.

#shankarnag #actor #birthday
Dr. Murugesh R Nirani (@niranimurugesh) 's Twitter Profile Photo

ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಬಂಗಾರ ಹನುಮಂತ ಅವರ ಪರವಾಗಿ ಸಂಡೂರಿನಲ್ಲಿಂದು ನಡೆದ ರೋಡ್ ಶೋ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರೊಡನೆ ಭಾಗವಹಿಸಿ ಮಾತನಾಡಿದೆನು. #Byelections2024 #sandurubyelection

ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಬಂಗಾರ ಹನುಮಂತ ಅವರ ಪರವಾಗಿ ಸಂಡೂರಿನಲ್ಲಿಂದು ನಡೆದ ರೋಡ್ ಶೋ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರೊಡನೆ ಭಾಗವಹಿಸಿ ಮಾತನಾಡಿದೆನು.

#Byelections2024 #sandurubyelection
Dr. Murugesh R Nirani (@niranimurugesh) 's Twitter Profile Photo

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಬಂಗಾರ ಹನುಮಂತು ಅವರ ಪರವಾಗಿ ಸಂಡೂರಿನ ಹಲವಾರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದೆನು. ಈ ವೇಳೆ ಪಕ್ಷದ ಸ್ಥಳೀಯ ನಾಯಕರು, ಮುಖಂಡರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೋ, ಆ ಮನೆ ತೀರ್ಥಕ್ಷೇತ್ರ ಇದ್ದಂತೆ. ಅಲ್ಲಿ ಸಂಪತ್ತು, ಆರೋಗ್ಯ ಸದಾ ನೆಲೆಸುತ್ತದೆ ಎಂಬ ಪ್ರತೀತಿ ಇದೆ. ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕವಾದ ತುಳಸಿಯ ಮದುವೆಯ ದಿನದಂದು, ಸರ್ವರಿಗೂ ಆ ಭಗವಂತನು ಒಳಿತನ್ನು ಮಾಡಲಿ. ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. #tulasihabba

ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೋ, ಆ ಮನೆ ತೀರ್ಥಕ್ಷೇತ್ರ ಇದ್ದಂತೆ. ಅಲ್ಲಿ ಸಂಪತ್ತು, ಆರೋಗ್ಯ ಸದಾ ನೆಲೆಸುತ್ತದೆ ಎಂಬ ಪ್ರತೀತಿ ಇದೆ. ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕವಾದ ತುಳಸಿಯ ಮದುವೆಯ ದಿನದಂದು, ಸರ್ವರಿಗೂ ಆ ಭಗವಂತನು ಒಳಿತನ್ನು ಮಾಡಲಿ. 

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.

#tulasihabba
Dr. Murugesh R Nirani (@niranimurugesh) 's Twitter Profile Photo

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಬದುಕಿನ ಪಾಠವನ್ನು ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ. ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು. ಹೀಗಾಗಿ ಸಶಕ್ತ, ಸಮೃದ್ಧ ಭಾರತಕ್ಕಾಗಿ ಅವರನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಲ್ಲಾ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #HappyChildrensDay

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಬದುಕಿನ ಪಾಠವನ್ನು ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ. ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು. ಹೀಗಾಗಿ ಸಶಕ್ತ, ಸಮೃದ್ಧ ಭಾರತಕ್ಕಾಗಿ ಅವರನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.

ಎಲ್ಲಾ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

#HappyChildrensDay